Saturday, August 20, 2011

ಅಣ್ಣಾ ವಿರೋದಿಗಳಿಂದ ಅಣ್ಣಾಗೊಂದು ಹಾಸ್ಯಾಸ್ಪದ ಸಲಹೆ

        ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಇದು ನಾವು ಕಳೆದ  ಹಲವು ದಶಕಗಳಿಂದ  ಕೇಳುತ್ತಿರುವ ಸತ್ಯ.(?). ಒಂದರ್ಥದಲ್ಲಿ ಇದು ನಿಜ, ಯಾವುದೇ ದೇಶದಲ್ಲಿ ನಮ್ಮಷ್ಟು ಮುಕ್ತವಾದ ಪ್ರಜಾಸತ್ತತೆ ಖಂಡಿತ ಇಲ್ಲ. ಇಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಂದನ್ನು ಪ್ರಜೆಯೇ ನಿರ್ಧರಿಸುತ್ತಾನೆ, ಎಂಬೆಲ್ಲ ಮಾತುಗಳಿವೆ ಆ ವಿಷಯಕ್ಕೆ ಆಮೇಲೆ ಬರೋಣ, ಏನೇ ಆದರು ನಮ್ಮ ಸಂವಿಧಾನ ವಿಶೇಷವಾದದ್ದು, ಪ್ರಜಾಸತ್ತಾತ್ಮಕವಾದ್ದು.
          ಆದರೆ ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಸಂವಿಧಾನ, ಅದರ ಸಮಾಜಮುಖಿಯಿಂದ ನಾವು ಗಳಿಸಿದ್ದಾದರೂ ಏನು,,,??

           ಸಂವಿಧಾನದ ಬಗ್ಗೆ ವಿಮರ್ಶೆಗಳು ಬಹಳ ನಡೆದಿರಬಹುದು, ಆದರೆ ಎಂದೂ ಅದರ weak point ತಿದ್ದುವ ಕೆಲಸ ನಡೆದಿಲ್ಲ,  ಪ್ರಜಾಪ್ರಭುತ್ವ ಎಂಬುದು ಒಳ್ಳೆಯ concept. ಆದರೆ ಅಲ್ಲಿ superior authority ಇಲ್ಲ. ಇಂದು ನಮ್ಮ ದೇಶಕ್ಕೆ ಬಂದಿರುವ ದುರ್ಗತಿ ಇದೆ ಕಾರಣದಿಂದ. ನಮ್ಮ ದೇಶಕ್ಕೆ ವೇಗವಾಗಿ ಅಭಿವೃದ್ಧಿ ಹೊಂದಲು ಈ ವಿಷಯ ಮಾರಕವಗ್ತಾ ಇದೆ.
          .                 ಜನಲೋಕಪಾಲ್ ಮಸೂದೆ ಸಂವಿಧಾನ ವಿರೋಧಿ ಎಂದು ಕೆಲವರ ಅಂಬೋಣ. ಯಾಕೆಂದರೆ ಇಡೀ ದೇಶವನ್ನು ಅದು control ಮಾಡಬಹುದು ಎಂಬ ಹೆದರಿಕೆಯಿಂದ. ಸಂವಿಧಾನ ಎಂಬುದು ಈ ದೇಶದ ಪ್ರಜೆಯಿಂದಲೇ ರಚಿಸಲ್ಪಟ್ಟಿದೆ. ಹಾಗೆ ಲೋಕಪಾಲ ಬಿಲ್ ಕೂಡ. ಸಂವಿಧಾನ ಸಂಪೂರ್ಣವಾಗಿ ಬ್ರಷ್ಟಾಚಾರ ತಡೆಯುವಲ್ಲಿ ವಿಫಲವಾದ್ದರಿಂದ ಈ ಬಿಲ್ ಜಾರಿಗಾಗಿ ಒತ್ತಯಮಾಡಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ ನಮ್ಮ ಅಭ್ವ್ರಿದ್ಧಿಗಾಗಿಯೇ ಹೊರತು ಯಾವುದೇ ಲಾಭಿಗಲ್ಲ.  ಅಣ್ಣಾ ಹಜಾರೆ ಯನ್ನು ಒಬ್ಬ ಸರ್ವಧಿಕಾರಿಯೆಂದು ಕರೆಯವ ವರ್ಗಗಳು ಇಂದು ನಮ್ಮ ಮುಂದೆ ಇವೆ. ಅವುಗಳು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಎಂದರೆ ಬ್ರಷ್ಟಚರವನ್ನು ತೊಲಗಿಸಲು ಸಂವಿಧಾನದಲ್ಲಿ ಈಗ ಇರುವ ಮಾರ್ಗಗಳು ಯಾವುವು? ಅವು ಎಷ್ಟರ ಮಟ್ಟಿಗೆ ಫಲಕಾರಿಯಗಿವೆ? ಇವು ಮುಂದೆ ಕೂಡ ಫಲಕಾರಿಯಗಬಲ್ಲುವೆ? 
                     ಲೋಕಪಾಲ ಬಿಲ್ ಯಾವುದೇ ಪ್ರಜೆಯ ಮೂಲಭೂತ ಹಕ್ಕನ್ನು ಕಸಿಯವುದಿಲ್ಲ, ಯಾರ ಬಾಳನ್ನೂ ಬೋಳು ಮಾಡುವುದಿಲ್ಲ ಈಗ ಜಾರಿಯಲ್ಲಿರುವ ಸಂವಿಧಾನಕ್ಕೆ ಅದು ಕಿಂಚಿತ್ತೂ ಧಕ್ಕೆ ಉಂಟುಮಾಡುವುದಿಲ್ಲ. ಕೇವಲ ಅನಾಚಾರಿಗಳಿಗೆ,ದೇಶದ್ರೋಹಿಗಳಿಗೆ ಅದು ಸಿಂಹಸ್ವಪ್ನ, ಹೀಗಿರುವಾಗ ಅದನ್ನು ವಿರೋದಿಸುವುದು ಯಾವ ಅರ್ಥದಲ್ಲಿ,,,?
         ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಯಾವುದೇ ಕೊರತೆಯಾಗದಂತೆ ಈ ಮಸೂದೆಯಲ್ಲಿ ನೋಡಿಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ ವಿರೋದಿ ಎಂಬುದು ಅರ್ಥಹೀನ ಮಾತು,, ಸಂವಿಧಾನದಿಂದ ಸಾಧ್ಯವಾಗದ್ದು ಇದರಿಂದ ಸಾಧ್ಯವಾಗಬಹುದು ಎಂಬುದು ನಮ್ಮ ಆಶಯ. 
     ಅಣ್ಣಾ ವಿರೋದಿಗಳಿಂದ ಅಣ್ಣಾಗೊಂದು ಹಾಸ್ಯಾಸ್ಪದ ಸಲಹೆ ಏನು ಗೊತ್ತೇ....?? ಅಣ್ಣಾ ರಾಜಕೀಯ ಪ್ರವೇಶಿಸಿ ಸಂಸತ್ತಿನಲ್ಲಿ ಕುಳಿತು ಆಮೇಲೆ ಬ್ರಷ್ಟಾಚಾರ ವಿರುದ್ಧ ಹೊರಾದಬೇಕಂತೆ,,,,,,,!!!!! ರಾಜಕೀಯ ಏನೆಂದು ಎಲ್ಲರಿಗೂ ಗೊತ್ತು. ಅಲ್ಲಿ ಸಾಧಿಸುವುದು ಏನು ಎಂದೂ ಗೊತ್ತು. ಈ ಮೊದಲು ದೇಶ ಉದ್ಧಾರ ಮಾಡಲು ರಾಜಕೀಯ ಸೇರಿದವರು ಏನಾದರು ಎಂದು ಕೂಡ ಗೊತ್ತು,ಹೀಗಿರುವಾಗ ಅಣ್ಣಾ ರಾಜಕೀಯ ಪ್ರವೇಶ ಎಷ್ಟು ಸಮಂಜಸ.....? ಹೊಲಸಿಗೆ ಇಳಿದು ಹೊಲಸು ತೊಳೆಯಲು ಸಾದ್ಯವೇ,,,,,,,,,,,??? ಮೈ ಎಲ್ಲ ಹೊಲಸಾದೀತು.
                          ಏನೇ ಆದರು ಭ್ರಷ್ಟಾಚಾರ ತೊಲಗಿಸುವುದು ನಮ್ಮ ಉದ್ದೇಶ, ತೊಲಗಿಸಲು ಸಕಲ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ,,, ಎಂದಿಗೂ ಅಣ್ಣಾ ಬೆನಿಗೆ ನಿಂತು ದೇಶವನ್ನು ಉಳಿಸುತ್ತೇವೆ,, ಸುಮ್ಮನೆ ಕಾರಣಗಳನ್ನು ಹುಡುಕಿ ಟೀಕೆಗಳನ್ನ ಮಾಡಿ ದೊಡ್ಡ ದೊಡ್ಡ ಫೋಸ್ ಕೊಡುವುದು ಬಿಟ್ಟು ದೇಶಕ್ಕಾಗಿ ಎಲ್ಲರೂ ಒಂದಾಗಿ ಬನ್ನಿ,,,, ಈ ದೇಶ ಎಂದಿಗೂ ನಿಮ್ಮನ್ನ ಮರೆಯಲ್ಲ, ನಿಮ್ಮ ಮನಸ್ಸಾಕ್ಷಿಯನ್ನೊಮ್ಮೆ ಕೇಳಿ ನೋಡಿ,,,,,,,,

                                                                                       ಜೈ ಹಿಂದ್,,,,,,,
                                                                                       ವಂದೇ ಮಾತರಂ,,,



Tuesday, August 16, 2011

ಬಿಸಿಯಾಗದೆ ಬೆಣ್ಣೆ ಕರಗದು

  ದೇಶದ ದುರವಸ್ತೆಯನ್ನು ಒಮ್ಮೊಮ್ಮೆ ನೆನೆವಾಗ ನಾವೆಲ್ಲಾ ಮನುಷ್ಯರೇ ಎಂಬ ಪ್ರಶ್ನೆ ಕಾಡುವುದಿದೆ,,, ಮನುಷ್ಯ ಬುದ್ದಿಜೀವಿ ತಿಳುವಳಿಕೆ ಉಳ್ಳ ಪ್ರಾಣಿ ಎಂದು ತಾನೆ ಘೋಷಿಸಿಕೊಂಡ ಮೇಲೆ good ಮತ್ತು bad ನಡುವೆ ಅಂತರ ಆತನಿಗೆ ತಿಲಿಯಲಾರದ್ದು ಆತಂಕಕಾರಿ ಹಾಗೂ ವಿಸ್ಮಯ,,,,,,,
       ದೇಶದಲ್ಲಿ against corruption movment ನಡೀತಾ ಇರೋದು ಎಲ್ಲರಿಗೂ ತಿಳಿದ ವಿಚಾರ,,, ಅದರಲ್ಲೂ ಮಾದ್ಯಮದವರಿಗೆ ಇದು ಮ್ರಿಷ್ಟಾನ್ನ ಭೋಜನ,,, ಹಜಾರೆ ಅವರು  ಪಾಪ ನಾನಿನ್ನು ಗಾಂಧೀ ಕಾಲದಲ್ಲೇ ಇದ್ದೇನೆಂದು ಭಾವಿಸಿ ಜನರಿಗೆ ಕರೆ ನೀಡಿದ್ದಾರೆ,, ಅವರ ತಪ್ಪಿಲ್ಲ ಬಿಡಿ,, ಹಾಲಿನಂತ ಮನುಷ್ಯ ಆತ,,,, ಸಾಯೋದ್ರೊಳಗೆ ದೇಶಕ್ಕೆ ಏನಾದ್ರೂ ಒಳ್ಳೇದು ಸಾಯೋಣ ಅಂತ ಅವ್ರ ಹಠ,,,
  ಆದರೆ ,,,,,,,,,,,,,,,,,,,,,,,,,,,,,,,,,,,,??????? 
       ೫೦ ಶೇಕಡಾ ಜನ ಅವರಿಗೆ suport ಮಾಡ್ತಾ ಇದ್ದಾರೆ. ಸಂತೋಷ. ಉಳಿದವರು ಈ ಚಳುವಳಿಯನ್ನು ಸ್ವಾರ್ತಕ್ಕಾಗಿ ಬಳಸುತ್ತಾ ಇರೋದು ಶೋಚನೀಯ,,, 
   ಪ್ರಥಮವಾಗಿ ಮಾಧ್ಯಮದವರು ಈ ವಿಷಯವನ್ನು ಎಷ್ಟು ಸೀರಿಯೇಸ್ ಆಗಿ ತೆಗೆದುಕೊಂಡಿದ್ದಾರೆ,,,,? ಪ್ರತಿ ವಿಷಯವನ್ನು
 ಕೃತಕವಾಗಿ ವರ್ಣನೆ ಮಾಡಿ ಚಾನೆಲ್ publicity hike ಮಾಡುವ ಯೋಜನೆ ಅವರಲ್ಲಿ ಎದ್ದು ಕಾಣ್ತಾ ಇದೆ,,,,,,,
       ಇರಲಿ so called ನಾಗರೀಕರು ಕೂಡ ಹಾಜರೆಯವರನ್ನು ಬೆಂಬಲಿಸದೇ ಅವರನ್ನು  ಹಾಗೂ ಲೋಕ್ಪಾಲ್ ಬಿಲ್ ಅನ್ನು ಜರಿಯುವಾಗ  ಹಜಾರೆಯವರಿಗೆ ಈ ಯಾಕ್ ಬೇಕಿತ್ತು ಅಂತ ಅನ್ಸತ್ತೆ,, ಮಣ್ಣು ತಿನ್ನೋ ಜನ ಒಳ್ಳೆದಾಗಲಿ ಎಂದು ಹಜಾರೆ ಬಯಸಿದ್ದೆ ದೊಡ್ಡ ಅಪರಾಧ ಎಂಬಂತೆ ಇವರು ವರ್ತಿಸುತ್ತಾರೆ.

ಇವರ ಸಮರ್ಥನೆ ಏನು ಗೊತ್ತೇ?

""
ಪ್ರಾಮಾಣಿಕವಾಗಿ ಎಲ್ಲರೂ ತಮ್ಮ ಎದೆ ಮೇಲೆ ಕೈಯಿಟ್ಟು ಹೇಳಿ ನಾವು ಯಾವುದು ತಪ್ಪು ಮಾಡಲಿಲ್ಲ, ನಾವು ಮಾಡುವುದು ಇಲ್ಲ ಅಂತ, ಇದೂ ಯಾರೂ ಹೇಳಲ್ಲ ಯಾಕಂದರೆ ಎಲ್ಲರೂ ಯಾವುದಾದರೊಂದು ರೀತಿಯಲ್ಲಿ ಭ್ರಷ್ಟರಾಗಿದ್ದೀರಿ, ಭ್ರಷ್ಟರಾಗುತ್ತೀರಿ, ತಪ್ಪು ಮಾಡದೆ ಇದ್ದವ ಮನುಷ್ಯನಲ್ಲ,
ಎಲ್ಲಿವರೆಗೆ ಅಧಿಕಾರದ ಕುರ್ಚಿ ಸಿಗುತ್ತೋ ಅಲ್ಲಿವರೆಗೆ ಹೋರಾಟ, ಅಧಿಕಾರ ಸಿಕ್ಕಿದ ನಂತರ ತಮ್ಮ ಸ್ವಾರ್ಥದ ಹೋರಾಟ ಅಲ್ಲದೆ ಮತ್ತೇನಿಲ್ಲ,ಇವತ್ತು  ಅಣ್ಣಾ ಹಜಾರೆ ಮತ್ತು ಅವರ ತಂಡದ ಹೋರಾಟ ಅದೇ ದಾರಿಗೆ ಹಿಡಿಯುವುದರಲ್ಲಿ ಯಾವುದೇ ಸಂಶಯ ಬೇಡ, ಉಪ್ಪು ತಿಂದ ಮನುಷ್ಯ ನೀರು ಕುಡಿಯುತ್ತಾನೆ ಅನ್ನುವ ಗಾಧೆ ಮಾತು ಗೊತ್ತಿದೆ ತಾನೇ, ಅಣ್ಣಾ ಮತ್ತು ತಂಡ ಈಗ ಉಪ್ಪು ತಿನ್ನುತ್ತಿದೆ ಯಾಕಂದರೆ ನೀರು ಕುಡಿಯಲೂ ಜನ್ಲೋಕ್ಪಾಲ್ ಬಿಲ್ ಜಾರಿಗೊಳ್ಳಬೇಕು ಇದೆ ಸತ್ಯ.ಪ್ರದಾನಿಯವರನ್ನ ಜನ ಲೋಕ್ಪಾಲ್ ಒಳಗೆ ಸೇರಿಸಿಕೊಳ್ಳುವುದು ಮೂರ್ಖತನ ಎಂದರೆ ತಪ್ಪಾಗದು, ಇದು ಒಂದು ಪ್ರಜಾಪ್ರಬುತ್ವದ ಸಂವಿದಾನ ವಿರೋದಿಯಾಗಿದೆ, ಇದರಲ್ಲಿ ಅಣ್ಣಾ ಹಜಾರೆ ತಂಡ ಏಕಾದಿಪತ್ಯದ ಆಡಳಿತ ನಡೆಸುವ ಸಲುವಾಗಿ ಮಾಡುವ ಕುತಂತ್ರ, ಎಲ್ಲವೂ ತನ್ನ ಅಧೀನಕ್ಕೆ ಬಂದಲ್ಲಿ ಮನಬಂದಂತೆ ಅಧಿಕಾರ ಚಲಾಯಿಸಬಹುದು ಅನ್ನುವ ಅಹಂಕಾರ ಇವರಲ್ಲಿ ಮನೆ ಮಾಡಿದೆ ಅಂದರೆ ತಪ್ಪಗದೂ ......   ""
 wt the hell,,,,,,,,,,?  ಇವರು ಯಾಕೆ ಈ ಮಾತು ಹೇಳ್ತಾ ಇದ್ದಾರೋ  ಗೊತ್ತಿಲ್ಲ. ಎಲ್ಲರೂ ತಪ್ಪು ಮಾಡ್ತಾ ಇದ್ದಾರೆ ಇದನ್ನೇ ಮುಂದುವರೆಸೋಣ ಎಂಬುದು ಯಾವ ಸೀಮೆಯ ಪೋಲಿಸಿ ರೀ,,,? ಪಕ್ಷದ ವಿಷಯ ಇಲ್ಲಿ ಬೇಡ ಯಾಕೆಂದರೆ ಎಲ್ಲರೂ ಬ್ರಷ್ಟರೆ ಎಂಬ ಮಾತು ಒಪ್ಪೋಣ. ಆದರೆ ಇದುವೇ ಮುಂದುವರೆಯಲಿ ಎಂಬುದು ಮೂರ್ಖತನದ ಮಾತು,,,, ಮತ್ತೆ ಅಣ್ಣಾ ಹಾಗೂ ತಂಡದವರನ್ನು ರಾಜಕಾರಣಿಗಳಿಗೆ ಹೋಲಿಸುವ  ಮಾತನ್ನು ಯಾವ ಭಾರತೀಯನೂ ಒಪ್ಪಲಾರ,, ದೇಶ ಹಾಗೂ ದೇಶಭಕ್ತಿ  ಇದ್ದವರಿಗೆ ಅವರ ಮೌಲ್ಯ ತಿಳಿದೀತು,, ಜನಲೋಕ್ಪಾಲ್ ಬಿಲ್ ಮೇಲ್ನೋಟಕ್ಕೆ superior hold ಮಾಡಿದೆ ಎಂಬ ಮಾತು ನಿಜ. ಆದರೆ  ಅದರ ಅವಶ್ಯಕತೆಯನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ,,, ರಾಜಕೀಯ ಮಿಶ್ರ ಮಾಡಬೇಡಿ,, ಇವರಿಗ್ಯಾಕೆ  ಅಣ್ಣಾ ಮೇಲೆ ಉರಿ ಎಂದು ಗೊತ್ತಿಲ್ಲ,,, ಶಾಲೆಯಲ್ಲಿ ಮಗ್ಗಿ ಹೇಳುವಾಗ ಮೇಷ್ಟ್ರು ಹೊಡೆದದ್ದನ್ನು ನೆನಪಿಸಿ,, ಬಿಸಿಯಾಗದೆ ಬೆಣ್ಣೆ ಕರಗದು ಎಂದು  ಅರ್ಥ ಮಾಡಿಕೊಳ್ಳಬೇಕು.. ಎಲ್ಲರೂ ಸೇರಿ ಹೀಗೆ ಚಳುವಳಿ ಮಾಡಿ ಬಿಲ್ ಜಾರಿ ಮಾಡಿದಾಗಲೇ ರಾಜಕಾರಣಿಗಳಿಗೆ ಭಯ ಹುಟ್ಟೋದು. ಇಲ್ಲಾಂದ್ರೆ ತಾವೇ ಎಲ್ಲ ಎಂಬ ಅಹಂಕಾರದಿಂದ ದೇಶ ಲೂಟಿ ಮಾಡ್ತಾರೆ,,, 
      ಲೋಕ್ಪಾಲ್ ಬಿಲ್ ಇಲ್ಲಿ ಯಾರನ್ನೂ ಆಳಬೇಕೆಂದು ಬಯಸಿಲ್ಲ,, ಹಾಗಿದ್ದಲ್ಲಿ ಅವರು ರಾಜಕೀಯ ಪ್ರವೇಶ ಮಾಡಿ ಏನೇನೋ ಮಾಡಿರೋರು,,, ಚರ್ಚೆ, ವಿಮರ್ಶೆಯ ಹೆಸರಲ್ಲಿ ಮಹಾನ್ ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯುವ ಯತ್ನ ,,,,
      ಬಿಲ್ ಸದಸ್ಯರಿಗೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಭಂದ ಇಲ್ಲ,,,,
  ದೇಶದ. "ಮಹಾನ್" ಪ್ರಜೆಗಳೇ ಮಾತು-ಮಾತಿಗೂ ರಾಜಕೀಯವನ್ನು ದೂರುತ್ತಿದ್ದಿರಿ. ಈಗ ಅವನ್ನು ಹೋಗಲಾಡಿಸುವ ಅಮೋಘ ಅವಕಾಶ ನಿಮ್ಮ ಮುಂದಿದೆ, ಮೀನ ಮೇಷ ಎನಿಸದಿರಿ. ಭ್ರಷ್ಟರನ್ನು ಓಡಿಸಲು ಒಂದಾಗಿ,,,,
   ಇದೊಬ್ಬ ದೇಶಪ್ರೇಮಿಯ ಕರೆ,,,,,,,,,,,,,,,,,,,,,,,,,,,,,,,,,,,  ಜೈ ಹಿಂದ್,,,,,,,